ನೈಸರ್ಗಿಕ ಕೃಷಿ, Connect With Nature

ನೈಸರ್ಗಿಕ ಕೃಷಿ ಒಂದು ವಿಬಿನ್ನ ಕೃಷಿ ಎಂದು ಇತ್ತೀಚೆಗೆ ಹೆಚ್ಚು ಪ್ರಚಲಿತವಾಗುತ್ತಿದೆ, ಆದರೆ ಇದುವೆ ನಮ್ಮ ಕೃಷಿ, ಪುರಾತನ ಕಾಲದಿಂದಲೂ ಅನುಸರಿಸುತ್ತಿರುವ ಪದ್ದತಿ.  ಆದರೆ ನೈಸರ್ಗಿಕ ಕೃಷಿ ಒಂದು ನಿಸರ್ಗದತ್ತ ಕೃಷಿ, ಇಲ್ಲಿ ಕೃಷಿಗಾಗಿ ಯಾವುದೇ ಒಳಸುರಿಗಳನ್ನು ಹೊರಗಡೆಯಿಂದ ತರುವ ಅವಶ್ಯಕತೆ ಇಲ್ಲ. ಇದು ಸಂಪೂರ್ಣವಾಗಿ ಗೋವು ಆದಾರಿತ ಕೃಷಿ, ನಮ್ಮ ದೇಶೀ ಆಕಳನ್ನು ಬಳಸಿಕೊಂಡು ಮಾಡುವ ಕೃಷಿ ಪದ್ದತಿ. ಕೆಲವರು ಸಾವಯವ ಮತ್ತು ನೈಸರ್ಗಿಕ ಕೃಷಿ ಎರಡೂ ಒಂದೇ ಎಂದು ಹೇಳುತ್ತಾರೆ, ಆದರೆ ಅದು ವಿಭಿನ್ನ. 
ನಾನು ಕೂಡ ನೈಸರ್ಗಿಕ ಕೃಷಿಯನ್ನು ಮಾಡಬೇಕೆಂದು ಯೋಚಿಸುತ್ತಿದ್ದಾಗ, ಫೇಸ್ ಬುಕ್ ಮೂಲಕ ಒಂದು ವರವಾಗಿ ಸಿಕ್ಕಿದ್ದು, "Connect With Nature"ಎಂಬ ಒಂದು ವಾಟ್ಸಪ್ ಗ್ರೂಪ್. ಇದು ಡಾ||ನಾಗಭೂಷಣ್ ಅವರು ಇದರ ರುವಾರಿ, ಈ ಗ್ರೂಪ್ ನಲ್ಲಿ ನೈಸರ್ಗಿಕ ಕೃಷಿಯ ಅಥಿರಥ ಮಹಾರಥರಿದ್ದಾರೆ. ಮೂವತ್ತು ನಲವತ್ತು ವರ್ಷಗಳಿಂದ ನೈಸರ್ಗಿಕ ಕೃಷಿ ಮಾಡುತ್ತಿರುವ ಮಹಾಗುರುಗಳಿದ್ದಾರೆ. ಪ್ರತಿದಿನ ಇಲ್ಲಿ ಅನೇಕ ವಿಚಾರ ವಿನಿಮಯ ನಡೆಯುತ್ತಿದ್ದು, ವಾರಕ್ಕೊಮ್ಮೆ ಒಂದು ವಿಶೇಷ ವಿಷಯದ ಮೇಲೆ ಚರ್ಚೆಯಾಗುತ್ತದೆ.
ಈ ಪೇಜಿನಲ್ಲಿ ಅಲ್ಲಿ ನಡೆಯುವ ಚರ್ಚೆಯ ವಿಷಯಗಳನ್ನು ಇಲ್ಲಿ ಹಂಚಿಕೊಳ್ಳಲು ಪ್ರಯತ್ನ ಮಾಡುತ್ತೇನೆ, ಏನಾದರೂ ತಪ್ಪುಗಳಿದ್ದಲ್ಲಿ ದಯವಿಟ್ಟು ಕ್ಷಮಿಸಿ.

ನೈಸರ್ಗಿಕ ಕೃಷಿ, Connect With Nature

ನೈಸರ್ಗಿಕ ಕೃಷಿ ಒಂದು ವಿಬಿನ್ನ ಕೃಷಿ ಎಂದು ಇತ್ತೀಚೆಗೆ ಹೆಚ್ಚು ಪ್ರಚಲಿತವಾಗುತ್ತಿದೆ, ಆದರೆ ಇದುವೆ ನಮ್ಮ ಕೃಷಿ, ಪುರಾತನ ಕಾಲದಿಂದಲೂ ಅನುಸರಿಸುತ್ತಿರುವ ಪದ್ದತಿ.  ಆದರ...