Fruit Model - ಹಣ್ಣಿನ ತೋಟ
ದಿನಾಂಕ 31-07-2020 ಮತ್ತು 01-08-2020, ಎರಡು ದಿನಗಳ ಕಾಲ ಪಂಚತರಂಗಿಣಿ (Five Layer) ಪದ್ದತಿಯಲ್ಲಿ ಹಣ್ನಿನ ಗಿಡಗಳ ಮಾದರಿ (Fruit Model) ಬಗ್ಗೆ ಚರ್ಚೆ ಮಾಡಲಾಯಿತು. ಇದರಲ್ಲಿ ಈ ಕೆಳಗಿನ ವಿಷಯಗಳ ಮೇಲೆ ಚರ್ಚೆ ಮಾಡಲಾಯಿತು,- ಮಣ್ಣಿನ್ನ ತಯಾರಿ ಮಾಡಿಕೊಳ್ಳುವಿಕೆ ( Revised )
- ಯಾವ ಮಣ್ಣಿಗೆ ಯಾವ ಹಣ್ಣಿನ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಬೇಕು
- ಯಾವ ಪ್ರದೇಶಕ್ಕೆ ಯಾವ ತರಹದ ಹಣ್ಣಿನ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಬೇಕು
- ಗಿಡಗಳ ಅಂತರ
- ಗಿಡಗಳನ್ನು ಹಾಕಲು ಗುಣಿಗಳನ್ನು ತಯಾರು & ಗೊಬ್ಬರ ಹಾಕುವ ಬಗ್ಗೆ ಮಾಹಿತಿ
- ಯಾವ ಯಾವ ಹಣ್ಣಿನ ಗಿಡಗಳನ್ನು ಯಾವ ಯಾವ ತಿಂಗಳಲ್ಲಿ ನೆಡಬೇಕು
- ಗಿಡಗಳ ಪಾಲನೆ / ಘೋಷಣೆ
- ಹಣ್ಣುಗಳ ಕೊಯ್ಲು ಮಾಡುವ (harvesting) ಬಗ್ಗೆ ವಿವರ.
- Marketing ಮಾರುಕಟ್ಟೆ ವ್ಯವಸ್ಥೆ
- ಇತರೆ ಯಾವುದೇ ಸಂಬಂಧಿತ ವಿಷಯವಾಗಿರಬಹುದು
ಮೇಲಿನ ವಿಷಯದ ಬಗ್ಗೆ ಈ ಕೆಳಗಿನ ಗುರುಗಳು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ,
ಪ್ರಶಾಂತ್ ಜಯರಾಮ್ ಸರ್
ಡಾಕ್ಟರ್ ಹನುಮೇಗೌಡರು
ಶ್ರೀ ತಮ್ಮಯ್ಯ ಸಾರ್
ಶ್ರೀ. ಕುಮಾರ್ ರಾಮಚಂದ್ರಪ್ಪ ಸಾರ್
ಶ್ರೀ ಚಂದ್ರಶೇಖರ್ ನಾರಣಾಪುರ
ಶ್ರೀ. ಶಿವಕುಮಾರ್ ಸಾರ್
ಶ್ರೀ. ಸಂದೀಪ್ ಮಂಜುನಾಥ್ ಸಾರ್
ಶ್ರೀ ವಿಶ್ವೇಶ್ವರ ಸಜ್ಜನ ಸಾರ್
ಇತರರು
ಕೊರೋನಾದಿಂದಾಗಿ ಹಲವು ಮಂದಿ ಸಂಕಷ್ಟಕ್ಕೆ ಸಿಲುಕಿ ಮತ್ತೆ ಮರಳಿ ಭೂಮಿಗೆ ಬಂದಿದ್ದಾರೆ, ಅವರಿಗೆ ಕೃಷಿಯಲ್ಲಿ ಭರವಸೆಯನ್ನು ಹುಟ್ಟಿಸುವ ಕಾರ್ಯವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಆಯ್ದುಕೊಂಡ ವಿಷಯ 'ಪ್ರೂಟ್ ಮಾಡೆಲ್' ಅಂದರೆ ಹಣ್ಣಿನ ತೋಟವನ್ನು ಬೆಳೆಸುವ ಬಗೆ. ಎರಡು ಮೂರು ವರ್ಷಗಳಲ್ಲಿ ಒಂದು ಸುಸ್ಥಿರವಾದ ತೋಟವನ್ನು ನೇಮಿಸುವ ಬಗ್ಗೆ ನಮ್ಮ ತಜ್ಞರು ನಿಮಗೆ ಮಾಹಿತಿಯನ್ನು ಕೊಟ್ಟಿದ್ದಾರೆ. ಇಲ್ಲಿ ಎಲ್ಲರಿಗೂ ಉಪಯೋಗವಾಗಲೆಂದು ಹಂಚಿಕೊಳ್ಳುತ್ತಿದ್ದೇನೆ.
ಡಾ. ಎಲ್ ಹನುಮೇಗೌಡ
Secretary. Dr. M H Marigouda - Harticulture Education & Research Foundation
ಹನುಮೇಗೌಡರು ,88 ವರ್ಷ ವಯಸ್ಸಾಗಿದ್ದು, ಕೃಷಿಯ ಬಗ್ಗೆ ಅವರಿಗೆ ಇರುವ ಉತ್ಸಾಹಕ್ಕೆ ಏನೂ ಕಡಿಮೆಯಿಲ್ಲ. ಇವರು ಮರಿಗೌಡರ ಜೊತೆ ಹಲವು ವರ್ಷಗಳ ಕಾಲ ಕೆಲಸ ಮಾಡಿದವರು.
ಡಾಕ್ಟರ್ ಹನುಮೇಗೌಡರು ತಮ್ಮ ಕೈಯಾರೆ ಬರೆದ ಒಂಬತ್ತು ಪುಟಗಳ ಮಾಹಿತಿ,ಡಾ|| ಹನುಮೆಗೌಡರ ಪ್ರತಿಕ್ರಿಯೆ:-
ಪ್ರಶಾಂತ್ ಜಯರಾಮ್ ಅವರ ಪ್ರತಿಕ್ರಿಯೆ:-
*ಯಾವುದೇ ಬೆಳೆ ಮಾಡುವ ಮುನ್ನ ಮಣ್ಣಿನ ಸುಧಾರಣೆ ಮತ್ತು ಸಂರಕ್ಷಣೆ ಹಾಗು ಮರಧಾರಿತ ಹಣ್ಣಿನ ಬೆಳೆ ಕುರಿತು ನಾರಾಯಣ ರೆಡ್ಡಿ ಅವರ ಸುಸ್ಥಿರ ಕೃಷಿ ಪಾಠಗಳು ಪುಸ್ತಕದಲ್ಲಿ ಮಾಹಿತಿಯಿದೆ,ಈ ಪುಸ್ತಕದ ಅನುಕೂಲ ಪಡೆಯಬಹುದು.*ವಿವಿಧ ಬೆಳೆಗಳಿಗೆ ಬೇಕಾಗುವ ಮಣ್ಣಿನ ಗುಣ,ಅಂತರ ಇವುಗಳ ಬಗ್ಗೆ ತೋಟಗಾರಿಕೆ ವಿವಿ ಯವರ ಸಮಗ್ರ ತೋಟಗಾರಿಕೆ ಕೈಪಿಡಿ ಅಥಾವಾ ಬೇರೆ ಪುಸ್ತಕಗಳ ನೆರವು ಪಡೆಯಬಹುದು.
*ವರ್ಷದ ಎಲ್ಲಾ ಕಾಲದಲ್ಲೂ ಹಣ್ಣು ಬರುವ ರೀತಿ ಆಯಾಯ ಪ್ರದೇಶಕ್ಕೆ ಹೊಂದುವ ಹಣ್ಣಿನ ಬೆಳೆ ಮಾಡುವುದು.
*ಕನಿಷ್ಠ 5-6 ಹಣ್ಣಿನ ಬೆಳೆಗಳು ಇರುವಂತೆ ನೋಡಿಕೊಳ್ಳುವುದು.
*ಸ್ಥಳೀಯ ಪ್ರದೇಶದಲ್ಲಿ ಮಾರುಕಟ್ಟೆ ಗಮನಿಸಿ ಬೆಳೆ ಹಾಕುವುದು ಮತ್ತು ನೇರ ಮಾರಾಟಕ್ಕೆ ಸ್ಥಳೀಯವಾಗಿ ಬೇಡಿಕೆ ಇರುವ ಬೆಳೆ ಹಾಕುವುದು.
*ಸ್ಥಳೀಯ ಹವಾಗುಣಕ್ಕೆ, ಮಣ್ಣಿಗೆ ಹೊಂದಿಕೊಳ್ಳುವ ಹಣ್ಣಿನ ಗಿಡಗಳನ್ನು ಹಾಕಿದಾಗ ಅವುಗಳಿಗೆ ಯಾವುದೇ ವಿಶೇಷ ಆರೈಕೆ, ಪಾಲನೆ, ಪೋಷಣೆ, ಒಳಸುರಿ ಇಲ್ಲದೇ ಸಹಜವಾಗಿ ಬೆಳೆಯುವುದು,ನಮ್ಮ ಮಣ್ಣಿಗೆ ಹೊಂದುವ ಹಣ್ಣಿನ ಬೆಳೆಯನ್ನು ಸೂಕ್ಷ್ಮವಾಗಿ ಗಮನಿಸಿ ಅನುಭವದ ಆಧಾರದಲ್ಲಿ ಅದನ್ನು ಖಚಿತ ಪಡಿಸಿಕೊಳ್ಳುವುದು.
*ಸ್ಥಳೀಯ ಪ್ರದೇಶದಲ್ಲಿ ಈಗಾಗಲೇ ತೋಟಗಾರಿಕೆ ಬೆಳೆ ಬೆಳೆದು ಯಶಸ್ಸು ಕಂಡಿರುವ ರೈತರ ತೋಟಗಳಿಗೆ ಭೇಟಿ ಮತ್ತು ಅವರ ಅನುಭವ ಪಡೆಯುವುದು.
*ಮೌಲ್ಯವರ್ಧನೆ ಬಗ್ಗೆ :ತೆಂಗಿನಿಂದ ಕೊಬ್ಬರಿ ಎಣ್ಣೆ,ಸೋಪು,ನಿಂಬೆಯಿಂದ ಜ್ಯೂಸ್,ಮಾವಿನಿಂದ ಉಪ್ಪಿನಕಾಯಿ,ಬಾಳೆಯಿಂದ ಚಿಪ್ಸ್, ಹಲ್ವಾ, ಬೆಟ್ಟದ ನೆಲ್ಲಿಕಾಯಿಂದ ಚೂರ್ಣ ಈ ರೀತಿ ಸಾಕಷ್ಟು ಹಣ್ಣುಗಳಿಂದ ವಿವಿಧ ರೀತಿ ಉತ್ಪನ್ನ ಮಾಡಬಹುದು, ಈ ಬಗ್ಗೆ ನುರಿತ ತಜ್ಞರಿಂದ ತಯಾರಿಕೆ ಕ್ರಮ ಕಲಿಯಬೇಕು.
ಚಂದ್ರಶೇಖರ ನಾರಣಾಪುರ, ಕೃಷಿ ನಿವಾಸ ಚಿಕ್ಕಮಗಳೂರು.
🐂 ನಾನು 2008 ರಲ್ಲಿ ಕೃಷಿ ಆರಂಭಿಸಿದಾಗ ಹಣ್ಣು ಆಧಾರಿತ ಕೃಷಿಯನ್ನೇ ಮಾಡಿದ್ದು. ನನಗೆ ಆಗ ಈಗಿನ ಬುದ್ಧಿಮತ್ತೆ ಇಲ್ಲದ ಕಾರಣ ಏಕ ರೂಪದ ಬಾಳೆ ಬೆಳೆ ಮಾಡಿದ್ದೆ. ಅನುಕೂಲವಾಯಿತು. ಈಗಿನ ಜ್ಞಾನ ಇದ್ದಿದ್ದರೆ ಬಹು ಹಣ್ಣಿನ ಬೆಳೆ ಮಾಡುತ್ತಿದ್ದೆ.
🐂ತೋಟಗಾರಿಕೆಯ ಲ್ಲಿ ಹಣ್ಣು ಬೆಳೆಗಳು ನಿಶ್ಚಿತ ಆದಾಯವನ್ನು ತಂದುಕೊಡಬಲ್ಲವು. ಈ ಕಾರಣದಿಂದ ಒಂದು ಎಕರೆ ಪ್ರದೇಶವನ್ನು ಎರಡು ಭಾಗ ಮಾಡಿ ಅರ್ದ ಎಕರೆಯಲ್ಲಿ 6×6 ರ ಅಳತೆಯಲ್ಲಿ (ಸಾಂದ್ರತೆಯಲ್ಲಿ) 610 ಬಾಳೆಯನ್ನು ಏಕ ಬೆಳೆಯಾಗಿ ಬೆಳೆಯ ಬಹುದು.
🐂 ಇನ್ನರ್ದ ಎಕರೆಯಲ್ಲಿ 15×15 ಅಡಿ ಅಳತೆಯಲ್ಲಿ 100 ನಿಂಬೆ ಗಿಡ. ನಿಂಬೆ ಗಿಡದ ಆಚೆ ಈಚೆ 15×15 ಅಡಿ ಅಳತೆಯಲ್ಲಿ 100 ಗಿಡ ಪಪ್ಪಾಯ . ಬದುವಿನ ಸುತ್ತಲೂ ಒಂದು ಹಲಸು ಒಂದು ಪೇರಲು (ಸೀಬೆ) ಈ ರೀತಿ 50 ಹಲಸು, 50 ಸೀಬೆ ಗಿಡಗಳನ್ನು ಬೆಳೆಯ ಬಹುದು. ನಿರಂತರ ಆದಾಯವನ್ನು ಗಳಿಸಬಹುದು.
ತಮ್ಮಯ್ಯ ಸರ್ ಅವರು ಆಡಿಯೋ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದಾರೆ:-
ಶಿವಕುಮಾರ್ ಅವರು ಆಡಿಯೋ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದಾರೆ ಹಾಗೂ ಹಲವು ಉತ್ಸಾಹಿ ಯುವ ಕೃಷಿಕರು ಕೇಳಿದ ಪ್ರಶ್ನೆಗಳಿಗೂ ಕೂಡ ಉತ್ತರ ನೀಡಿದ್ದಾರೆ. ಈ ಚರ್ಚೆಯಲ್ಲಿ ಅವರು ಮಾತನಾಡಿದ ಎಲ್ಲಾ ಆಡಿಯೋಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.
ಶಿವಕುಮಾರ್ ಅವರ ಆಡಿಯೋ - ಹಣ್ಣಿನ ತೋಟಶಿವಕುಮಾರ್ ಅವರ ಆಡಿಯೋ - ಹಣ್ಣಿನ ತೋಟ- 1
ಕುಮಾರ ರಾಮಚಂದ್ರಪ್ಪ, ಕೃಷಿ ನಿವಾಸ ಚಿಕ್ಕಮಗಳೂರು.
ಶ್ರೀ. ಸಂದೀಪ್ ಮಂಜುನಾಥ್ ಅವರ ಪ್ರತಿಕ್ರಿಯೆ
- ಮರದ ತೋಟ ಮಾಡುವಾಗ ಸ್ವಲ್ಪ ಹುಷಾರಾಗಿರಿ ಏಕೆಂದರೆ ಒಮ್ಮೆ ಹಾಕಿದ ನಂತರ ಅದನ್ನು ಬದಲಾವಣೆ ಮಾಡುವುದು ತುಂಬಾ ಕಷ್ಟ.
- ಸಾಕಷ್ಟು ಅಧ್ಯಯನ ಮಾಡಿ
- ಮಾಡಿರುವ ತೋಟಗಳನ್ನು ಹೋಗಿ ನೋಡಿಕೊಂಡು ಬನ್ನಿ ನಂತರ ಆರಂಭ ಮಾಡಿ
- ಇಲ್ಲಿ ನಾವು ಕೊಟ್ಟ ಮಾಹಿತಿ ಕೇವಲ ಚುಟುಕುಗಳು ಅಷ್ಟೇ
1. Ravi kumar (ಗಡ್ಡದವರು) Bellary - 9986711975
2. Doddabasavana Gouda - Bellary - 9449171590
3. Sangareddy (blue shirt) ರಾಯಚೂರು 9164777109
4. Dr. B. M Nagabhushana (co-ordinator, MSRIT - LSIKC, Bangalore)
5. Shivakumara Heggavadipura (ಮಾರ್ಗದರ್ಶಕರು)
6. Uday ಮೈಸೂರು 9980377787
7. Harish ಕೋಲಾರ - +917892862984
Vegetable Model - ತರಕಾರಿ ತೋಟ
ಕೆಳಗಿನ ಆಡಿಯೋದಲ್ಲಿ ನಮ್ಮ ಅದ್ಬುತ ರೈತರಾದ ಕಾಳಪ್ಪನವರು ಮಾತನಾಡಿದ್ದಾರೆ,
ಆಡಿಯೋ ಫೈಲ್
ಕಣ್ಮರೆಯಾಗುತ್ತಿರುವ ಹಲವಾರು ಸಸ್ಯ ತರಕಾರಿ ಸೊಪ್ಪುಗಳ ಬೀಜಗಳು ಇವರಲ್ಲಿ ದೊರೆಯುವುದು ಒಂದು ವಿಶೇಷ, ಅವನ್ನು ನಾವು ಉಳಿಸಿ ಬೆಳೆಸಿ ಮತ್ತೆ ಉಪಯೋಗದ ಹಾದಿಗೆ ತರುವುದು ನಮ್ಮ ಗುರುತರವಾದ ಜವಾಬ್ದಾರಿ
ನಮ್ಮ ಇನ್ನೊಬ್ಬ ಸಾಧಕರಾದ ಶ್ರೀ ಶಿವಕುಮಾರ್ ಸ್ವಾಮಿಯವರ ಮಾತುಗಳನ್ನು ಕೇಳಿ,
Shivakumar Swamy - 1
Shivakumar Swamy - 2








