Gokrupamrutha-ಗೋಕೃಪಾಮೃತ


ಕೃಷಿ, ಭಾರತದ ಮುಖ್ಯ ಕಸುಬು. ಭಾರತದ ಶೇ 70 ರಷ್ಟು ಜನ ಕೃಷಿ ಮೇಲೆಯೇ ಅವಲಂಬಿತವಾಗಿದೆ. ಹಾಗೆಯೇ ರೈತ ನಮ್ಮ ದೇಶದ ಬೆನ್ನೆಲುಬು ಕೂಡ. ಆದರೆ 1960 ರ ಹಸಿರು ಕ್ರಾಂತಿಯ ಪ್ರಭಾವದಿಂದ ಇಂದು ಕೃಷಿ ಅವನತಿಯ ದಾರಿಯತ್ತ ಸಾಗುತ್ತಿದ್ದು, ಕೃಷಿ ಅತ್ಯಂತ ನಷ್ಟಕರ ಎಂಬ ಭಾವನೆಗೆ ಬರಬೇಕಾಗಿದೆ. ಇದಕ್ಕೆ ಮುಖ್ಯ ಕಾರಣ ರೈತರು ತಮ್ಮ ಕೃಷಿ ಕಾರ್ಯಕ್ಕಾಗಿ ಬೇರೆಯವರನ್ನು ಅವಲಂಬಿಸಿರುವುದು. ಇಂದು ರೈತ ಪ್ರತಿಯೊಂದನ್ನು ಹೊರಗಡೆಯಿಂದ ತಂದು ತನ್ನ ಕೃಷಿ ಕಾರ್ಯ ಮಾಡುತ್ತಿದ್ದಾನೆ, ಇದರಿಂದ ಅವನಿಗೆ ಕೃಷಿ ಒಂದು ನಷ್ಟದಾಯಕ ಕಾಯಕವಾಗಿದೆ.

ನಮ್ಮ ಪೂರ್ವಿಕರು ಕೃಷಿಯನ್ನು ಒಂದು ತಪಸ್ಸಿನಂತೆ ಪಾಲಿಸುತ್ತಿದ್ದರು ಹಾಗೂ ಎಲ್ಲಾ ಒಳಸುರಿಗಳನ್ನು ತಾವೆ ತಯಾರಿಸಿಕೊಳ್ಳುತ್ತಿದ್ದರು. ನಮ್ಮ ಪೂರ್ವಿಕರು ಗೋಮಾತೆ ಹಾಗೂ ಅದರ ಉತ್ಪನ್ನಗಳನ್ನು ಬಳಸಿ, ಕೃಷಿ ಮಾಡುತ್ತಿದ್ದರು ಮತ್ತು ಅದರಲ್ಲಿ ಸಂತೋಷವನ್ನು ಕಾಣುತ್ತಿದ್ದರು.

1960 ರಿಂದ ನಾವುಗಳು ಭೂಮಾತೆಯನ್ನು ವಿಷಗಳಿಂದ ಕಲ್ಮಶ ಮಾಡಿ ಅವಳ ಆರೋಗ್ಯವನ್ನು ಹಾಳು ಮಾಡಿದ್ದೇವೆ. ಈಗ ನಮ್ಮೆಲ್ಲರ ಆದ್ಯ ಕರ್ತವ್ಯ ಏನೆಂದರೆ, ಮತ್ತೆ ಭೂಮಾತೆಯನ್ನು ವಿಷಮುಕ್ತ ಮಾಡುವುದು. ಇದಕ್ಕೆ ಈಗ ಇರುವುದು ಗೋವು ಆದಾರಿತ ಕೃಷಿ, ಜೀವಾಮೃತ, ಬೀಜಾಮೃತ ಹಾಗೂ ಇನ್ನಿತರ ಗೋವು ಆದಾರಿತ ಒಳಸುರಿಗಳು. ಇದೇ ಗೋವು ಆದಾರಿತವಾಗಿ ಬಂದಿರುವ ಅಮೃತಾನೆ “ಗೋಕೃಪಾಮೃತ”!!!!!

ಗೋಕೃಪಾಮೃತ-> ಇದು ಗುಜರಾತಿನ ಬನ್ಸಿ ಗೋಶಾಲೆಯ ಶ್ರೀಮಾನ್ ಗೋಪಾಲ್ ಬಾಯ್ ಸುತಾರಿಯಾ ಎಂಬುವವರು ಸುಮಾರು ವರ್ಷಗಳ ಕಾಲ ಶ್ರಮ ಪಟ್ಟು, ಲಕ್ಷಾಂತರ ರೂಪಾಯಿಗಳನ್ನು ವ್ಯಯಮಾಡಿ ಈ ಅಮೃತಜಲವನ್ನು ಸಿದ್ದ ಮಾಡಿದ್ದಾರೆ. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ, ಕೋಟಿಗಟ್ಟಲೆ ರೂಪಾಯಿಗಳನ್ನು ಅವರು ಸಂಪಾದಿಸಬಹುದಿತ್ತು, ಆದರೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕರವೀರ ತಾಲ್ಲೂಕಿನ ಕನೇರಿ ಸಿದ್ದಗಿರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ಸಲಹೆಯ ಮೇರೆಗೆ ಗೋಕೃಪಾಮೃತವನ್ನು ಉಚಿತವಾಗಿ ನೀಡುತ್ತಿದ್ದಾರೆ. ಇದರ ಜೊತೆಗೆ ಉಚಿತವಾಗಿ ರೈತರಿಗೆ ಮಾರ್ಗದರ್ಶನ ಕೂಡ ನೀಡುತ್ತಿದ್ದಾರೆ.

ಕನೇರಿ ಸಿದ್ದಗಿರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಇದೊಂದು ಆಂದೋಲನದ ರೀತಿಯಲ್ಲಿ  ಪ್ರಚಾರ ಮಾಡುತ್ತಿದ್ದಾರೆ. ಮಠದ ವತಿಯಿಂದ ಕೂಡ ರೈತರಿಗೆ ಉಚಿತವಾಗಿ ಜಲವನ್ನು ವಿತರಣೆ ಮಾಡುತ್ತಿದ್ದ, ಈಗಾಗಲೇ ಅನೇಕ ರೈತರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ.

ಕರ್ನಾಟಕದಲ್ಲಿ ಗೋಕೃಪಾಮೃತವನ್ನು ಉಚಿತವಾಗಿ ರೈತರಿಗೆ ನೀಡುತ್ತಾ, ಜನಪರ ಕಾಳಜಿಯುಳ್ಳ ಅನೇಕ ಪ್ರಗತಿಪರ ಚಿಂತಕರು ಹಾಗೂ ರೈತರು ಸಾಮಾಜಿಕ ಜಾಲತಾಣ ಹಾಗೂ ಇನ್ನಿತರ ಮಾದ್ಯಮಗಳ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಹಾಗೆಯೇ ಜಿಲ್ಲಾವಾರು ರೈತರ ಮಾಹಿತಿಯನ್ನು ಕೂಡ ಸಂಗ್ರಹಿಸಿ, ನೈಸರ್ಗಿಕ ಕೃಷಿಯಲ್ಲಿ ಆಸಕ್ತಿ ಇರುವ ರೈತರಿಗೆ ತ್ವರಿತವಾಗಿ ಕೃಪಾಮೃತ ದೊರೆಯುವಂತೆ ಕಾಳಜಿ ವಹಿಸುತ್ತಿದ್ದಾರೆ. ಒಟ್ಟಾರೆ ಇದೊಂದು ವಿಷಮುಕ್ತ ಕೃಷಿಯ ಕ್ರಾಂತಿಯ ರೀತಿ ಹೆಚ್ಚು ಹೆಚ್ಚು ಪ್ರಚಲಿತವಾಗುತ್ತಿದೆ.

ಗೋಕೃಪಾಮೃತವನ್ನು ತಯಾರಿಸುವ ವಿಧಾನ:- 
        ಗೋಕೃಪಾಮೃತವನ್ನು ತಯಾರಿಸುವುದು ಅತೀ ಸರಳ ಹಾಗೂ ಸುಲಭ. ಇದಕ್ಕೆ ಬೇಕಾಗಿರುವ ಪಧಾರ್ಥಗಳು,
    - 1 ಲೀಟರ್ ಗೋಕೃಪಾಮೃತ
    - 2 ಕೆ ಜಿ ಸಾವಯವ ಬೆಲ್ಲ
    - 2 ಲೀಟರ್ ದೇಶೀ ಆಕಳ ಮಜ್ಜಿಗೆ (ಒಂದರಿಂದ ಮೂರು ದಿನದ ಮಜ್ಜಿಗೆ)
    - 200 ಲೀಟರ್ ಸಾಮಾರ್ಥ್ಯದ ಸ್ವಚ್ಚವಾದ ಪ್ಲಾಸ್ಟಿಕ್ ಡ್ರಮ್
            200 ಲೀಟರ್ ಡ್ರಮ್ ನಲ್ಲಿ ಸ್ವಚ್ಚವಾದ ನೀರನ್ನು ತುಂಬಿ, ಅದಕ್ಕೆ ಬೆಲ್ಲ ಮತ್ತು ಮಜ್ಜಿಗೆಯನ್ನು ಸೇರಿಸಬೇಕು, ನಂತರ ಬೇರೆ ರೈತರಿಂದ ತೆಗೆದುಕೊಂಡು ಬಂದ ಕೃಪಾಮೃತವನ್ನು ಇದಕ್ಕೆ ಸೇರಿಸಬೇಕು, ನಂತರ ಒಂದು ತೆಳುವಾದ ಬಟ್ಟೆಯಿಂದ ಡ್ರಮ್ ಮುಚ್ಚಬೇಕು. ಈ ಮಿಶ್ರಣವನ್ನು ಪ್ರತಿದಿನ ಎರಡರಿಂದ ಮೂರು ಬಾರಿ ಒಂದು ಕೋಲಿನಿಂದ ಪ್ರಧಕ್ಷೀಣಾಕಾರವಾಗಿ ತಿರುಗಿಸಬೇಕು. ಈ ರೀತಿ ತಿರುಗಿಸಿದ ಮಿಶ್ರಣ 5 ರಿಂದ 6ನೇ ದಿನಕ್ಕೆ ಬಳಸಲು ಸಿದ್ದವಾಗುತ್ತದೆ.

ಗೋಕೃಪಾಮೃತವನ್ನು ಬಳಸುವ ವಿಧಾನ:- ಮೇಲಿನ ರೀತಿಯಲ್ಲಿ ತಯಾರಿಸಿದ ಕೃಪಾಮೃತವನ್ನು ಒಂದು ಎಕರೆಗೆ 1000 ಲೀಟರ್ ನ್ನು ನೀರಿನ ಮುಖಾಂತರ ಅಥವಾ ಡ್ರಿಪ್ ಮುಖಾಂತರ ಮೊದಲಬಾರಿ ಕೊಡಬೇಕು. ನಂತರ 500 ಲೀಟರ್ ನಂತೆ ಪ್ರತಿಬಾರಿ ನೀರು ಕೊಟುವಾಗ ಕೊಟ್ಟರೆ ಉತ್ತಮ ಪಲಿತಾಂಶವನ್ನು ಪಡೆಯಬಹುದು. ಸಿಂಪಡಣೆಗೆ 2 ರಿಂದ 3 ಲೀಟರ್ ಕೃಪಾಮೃತವನ್ನು ಪ್ರತಿ ಕ್ಯಾನಿಗೆ ಸೇರಿಸಬೇಕು.
        ಕೀಟಬಾದೆಗೆ ಗೋಕೃಪಾಮೃತ ಅತ್ಯುತ್ತಮ ಪರಿಹಾರವನ್ನು ನೀಡುತ್ತದೆ. ಹುಳಿ ಮಜ್ಜಿಗೆಯಲ್ಲಿ ತಾಮ್ರದ ಚೂರನ್ನು ಹಾಕಿ, 45 ದಿನಗಳ ಕಾಲ ನೆರಳಿನಲ್ಲಿ ಗಾಡಿ ಆಡುವ ರೀತಿಯಲ್ಲಿ ಇಡಬೇಕು, ಈ ತಾಮ್ರ ಮಿಶ್ರಿತ 2 ಲೀಟರ್ ಮಜ್ಜಿಗೆಯನ್ನು, 2 ಲೀಟರ್ ಗೋಕೃಪಾಮೃತ ಜಲ ಮತ್ತು 2 ಲೀಟರ್ ತಾಜಾ ಗೋ ಮೂತ್ರವನ್ನು ಸೇರಿಸಿ ಸಿಂಪಡಣೆ ಮಾಡಿದರೆ ಹತೋಟಿಗೆ ಬರುತ್ತದೆ.

ಗೋಕೃಪಾಮೃತ ದೊರೆಯುವ ಸ್ಥಳ:- 
    ನೈಸರ್ಗಿಕ ಕೃಷಿ ಮಾಡಬಹಿಸುವ ರೈತರು ಗುಜರಾತಿನ ಬನ್ಸಿ ಗೋಶಾಲೆಯಿಂದ ಪಡೆಯಬಹುದು ಮತ್ತು ಕನೇರಿ ಸಿದ್ದಗಿರಿ ಮಠದಲ್ಲಿ  ಕೂಡ ಪಡೆಯಬಹುದು. ಈಗಾಗಲೇ ಸುಮಾರು ರೈತರು ಬಳಸಿ, ಜೊತೆಗೆ ಸಾವಿರಾರು ರೈತರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಹೆಚ್ಚಿನ ಮಾಹಿತಿಗಾಗಿ ಶ್ರೀಮಾನ್ ರಾಜೇಶ್ವರ್ ರಾವ್ (9449596039) ಮತ್ತು ಶ್ರೀಮಾನ್ ಎಂ.ಡಿ. ಪ್ರಧಾನಿ (8095289464) ಇವರನ್ನು ಸಂಪರ್ಕಮಾಡಿ,
ಇದರ ಜೊತೆಗೆ ಗೋಕೃಪಾಮೃತ ದೊರೆಯುವ ರೈತರ ವಿಳಾಸ ಈ ಕೆಳಗೆ ನೀಡಲಾಗಿದೆ,
                ಹೆಸರು                            ಊರು          ಜಿಲ್ಲೆ                ಮೊಬೈಲ್
    - ಶ್ರೀ ಬಸವರಾಜ ದಾಡಿಭಾವಿ,     ಬೆನ್ನೂರು,         ನವಲಗುಂದ,    73382 38945
    - ಶ್ರೀ ನವೀನ ಕಾರಡ್ಡಿ,                 ಕುಸುಗಲ,        ಹುಬ್ಬಳ್ಳಿ,            88670 05688
    - ಶ್ರೀ ಎಂ ಎಂ ನೂಲ್ವಿ,                ಯಲ್ಲಾಪುರ,      ಹುಬ್ಬಳ್ಳಿ,            99646 19335
    - ಶ್ರೀ ಮಂಜುನಾಥ್,                   ಹಾನಗಲ್,       ಹಾವೇರಿ,          80732 35089
    - ಶ್ರೀ ಎ ಎಸ್ ಮೂಲಗಿ                ಅಥನಿ,            ಬೆಳಗಾವಿ,         78294 73799
    - ಶ್ರೀ ಈರನಗೌಡ ಬಿ ಪಾಟಿಲ್,     ಕಾಟ್ಕೋಲ,      ಬೆಳಗಾವಿ,        99729 42938
    - ಶ್ರೀ ಮಹಾವೀರ್ ಡಿ ಶೆಟ್ಟಿ,        ರಾಯ್ ಬಾಗ್,    ಭೆಳಗಾವಿ,        99164 68643    
    - ಶ್ರೀ ದುಂಡಪ್ಪ ಕಲ್ಲಿಗುಡಿ,           ಬಿಲಕುಂಡಿ,        ಬೆಳಗಾವಿ        91641 19201    
    - ಶ್ರೀ ಮಲ್ಲಿಕಾರ್ಜುನ ಬಾಗೇವಾಡಿ, ಹುಲಿಕೊತ್ತಲ,   ಬೆಳಗಾವಿ        98458 47022
    - ಶ್ರೀ ತುಕಾರಾಮ್ ಆರ್ ಪವಾರ್, ಗೋಲಸಂಗಿ,    ಬಿಜಾಪುರ         86606 29659
    - ಶ್ರೀ ಹಜರತ ಅಲಿ ನಾಯಕೋಡಿ, ಭಂಟನೂರ,     ಬಿಜಾಪುರ          70198 56310, 73534 80906
    - ಶ್ರೀ ರಮೇಶ್ ದರ್ಪನ್ನನವರ್,   ನಿದೋನಿ,          ವಿಜಯಪುರ        89519 71008
    - ಶ್ರೀ ಸಂತೋಷ್,                    ಹೊಸೂರು,        ವಿಜಯಪುರ       98807 41506
    - ಶ್ರೀ ಅಣ್ಣಾಸಾಹೇಬ ಮೂಲಿಮನಿ,  ಸಾಲವಾಡಗಿ, ಬಸವನ ಬಾಗೆವಾಡಿ, 98808 55844
    - ಶ್ರೀ ಲಕ್ಷ್ಮಣ್ ಕೃಷ್ಣಗೌಡರ್,        ಹಿರೆಸಾನ್ಸಿ,         ಬಾಗಲಕೋಟೆ    99728 40647
    - ಶ್ರೀ ತಿಮ್ಮಣ್ಣ ಗೌಡ,                ಮುದೋಳ,        ಬಾಗಲಕೋಟೆ    99001 40369, 80953 61979  
    - ಶ್ರೀ ಮಂಜುನಾಥ್,                ಬಳ್ಳೇಶ್ವರ,          ದಾವಣಗೆರೆ        95355 27671
    - ಶ್ರೀ ಕುಮಾರ್ ಜಿ ಹೆಚ್           ಕುಂಕುವ            ದಾವಣಗೆರೆ        73491 99551
    - ಶ್ರೀ ರವಿ ರಾಮಕೃಷ್ಣಪ್ಪ,                                  ಬೆಂಗಳೂರು     99017 88622
    - ಶ್ರೀ ಮಲ್ಲೀಕ್ ನದಾಫ್,           ಉಪನಾಳ,        ರಾಯಚೂರು    97418 74505
    - ಶ್ರೀ ಗಂಗಾಧರ್,                    ನೆಲಮಂಗಲ,     ತುಮಕೂರು      99860 45009
    - ಶ್ರೀ ಶಿವಕುಮಾರ್,                 ಕುಣಿಗಲ್,         ತುಮಕೂರು      88846 86032
    - ಶ್ರೀ ತಮ್ಮಯ್ಯ                       ಹುಣುಸೂರು                             87624 92842
    - ಶ್ರೀ ಕೆ ಸಿ ವೆಂಕಟೇಶ್,            ಬನ್ನೂರು,          ಮಂಡ್ಯ            84949 46910
    - ಶ್ರೀ ಮಲ್ಲಿಕಾರ್ಜುನ ಬಿರಾದಾರ,  ಕಲ್ಲೂರ. ಬಿ      ಗುಲ್ಬರ್ಗಾ        9632057071
 
 

ನೈಸರ್ಗಿಕ ಕೃಷಿ, Connect With Nature

ನೈಸರ್ಗಿಕ ಕೃಷಿ ಒಂದು ವಿಬಿನ್ನ ಕೃಷಿ ಎಂದು ಇತ್ತೀಚೆಗೆ ಹೆಚ್ಚು ಪ್ರಚಲಿತವಾಗುತ್ತಿದೆ, ಆದರೆ ಇದುವೆ ನಮ್ಮ ಕೃಷಿ, ಪುರಾತನ ಕಾಲದಿಂದಲೂ ಅನುಸರಿಸುತ್ತಿರುವ ಪದ್ದತಿ.  ಆದರ...